ಅಮ್ಮಾ.... ನನ್ನಮ್ಮ
ತಂದೆಯ ಮುದ್ದಿನ ಮಗಳಾಗಿ ಬೆಳೆದ
ನೀ ಅವರಂತೆಯೇ ನಿಶ್ಕಲ್ಮಶ ಮನಸ್ಸಿನವಳು
ವರಿಸಿದರೇ ನಿನ್ನನ್ನೇ ಎಂದಿದ್ದ ಆತನ ಜೀವನಕ್ಕೆ ಬೆಳಕಾಗಿ ಬಂದೆ , ಅವನ ಮನೆ- ಮನ ಬೆಳಗಿಸಿದೆ.
ಸದಾ ಹಸನ್ಮುಖಿಯಾದ ನೀನು ತಾಯಿಗಿಂತ
ಗೆಳತಿಯಾಗಿಯೇ ನನ್ನೊಂದಿಗೆ ಬೆರೆತೆ.
ಜಿಂಕೆಯಂತೆ ಸದಾ ಪುಟಿಯುವ ನೀನು,
ನಿನ್ನ ಜೀವನವನ್ನೇ ಪ್ರೀತಿಪಾತ್ರರಿಗೆ ಮುಡಿಪಾಗಿಟ್ಟೆ.
ಯಾರೇ ನಿನಗೆ ನೋವುಂಟುಮಾಡಿದರೂ ಒಮ್ಮೆಯೂ
ನೀ ಅವರನ್ನು ನೋಯಿಸಲಿಲ್ಲ.
ಸಾವಿರಾರು ಮಕ್ಕಳ ಭವಿಷ್ಯ ರೂಪಿಸಲು
ನಿನ್ನ ಜೀವನವನ್ನೇ ಅಪಿðಸಿದೆ.
ಸಹೃದಯಿಯಾದ ನೀನು ನನ್ನೆಲ್ಲಾ ಗೆಳೆಯರಿಗೆ
ಅಚ್ಚುಮೆಚ್ಚು.
ನಮ್ಮ ಮನೆಯ ಸ್ಫೂತಿð ಸೆಲೆಯಾದ ನೀನೇ ನಮಗೆ ಆದಶð.
ನನ್ನ ಮುದ್ದಿನ ನಿಮ್ಮು(ಅಮ್ಮ, ಮಾ,
ನಿಮ್ಮಿ…) ನಿನಗೆ ಹುಟ್ಟುಹಬ್ಬದ ಶುಭ ಹಾರೈಕೆ...
No comments:
Post a Comment